ಅನಿವಾಸಿ ಭಾರತೀಯ


ಅನಿವಾಸಿ ಭಾರತೀಯ

ಜಾಗತೀಕರಣದಿಂದಾಗಿ ಜಾಗತಿಕ ಗ್ರಾಮ ಪರಿಕಲ್ಪನೆ ಪ್ರಪಂಚಾದ್ಯಂತ ಅಸ್ತಿತ್ವಕ್ಕೆ ಬಂದಿದೆ. ಕನ್ನಡಿಗರು ಅನೇಕ ವಿದೇಶಗಳಲ್ಲಿ ನೆಲೆಸಿ ಅನಿವಾಸಿ ಭಾರತೀಯರು ಎನಿಸಿಕೊಂಡಿದ್ದಾರೆ. ಕರ್ನಾಟಕದ ಅನಿವಾಸಿ ಭಾರತೀಯರನ್ನು ಮೂಲ ನೆಲೆಗೆ ಕರೆತರುವುದಕ್ಕಾಗಿ ರಾಜ್ಯ ಸರ್ಕಾರವು “ಅನಿವಾಸಿ ಭಾರತೀಯ ಸಮಿತಿ” ಯನ್ನು ಅಸ್ತಿತ್ವಕ್ಕೆ ತಂದಿರುತ್ತದೆ.


ಮಾನ್ಯ ಮುಖ್ಯಮಂತ್ರಿಗಳು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಮತ್ತು ಸಂಪುಟ ದರ್ಜೆಯ ಸ್ಥಾನಮಾನದ ಒಬ್ಬರು ಉಪಾಧ್ಯಕ್ಷರು ಸಮಿತಿಯಲ್ಲಿರುವುದು ಇದರ ಕಾರ್ಯ ಚಟುವಟಿಕೆಗಳ ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕದ ಅನಿವಾಸಿ ಭಾರತೀಯರಿಂದ ಸಹಾಯಕ್ಕಾಗಿ “ಅನಿವಾಸಿ ಭಾರತೀಯ ಸಮಿತಿ” ಶ್ರಮಿಸುತ್ತಿದೆ.


ಕರ್ನಾಟಕವು ಸಂಪದ್ಭರಿತ ವಿಶಾಲ ರಾಜ್ಯವಾಗಿದ್ದರಿಂದ ಹೂಡಿಕೆ ಅಪಾರ ಅವಕಾಶಗಳಿವೆ. ಹೂಡಿಕೆ ಅನುಕೂಲವಾಗುವ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರವು ಮಾಡಿಕೊಟ್ಟಿದೆ. ಅನಿವಾಸಿ ಭಾರತೀಯರು ರಾಜ್ಯದಲ್ಲಿ ಹೂಡಿಕೆ ಮಾಡುವುದಕ್ಕೆ ಅನುಕೂಲವಾಗಲೆಂದು ಕರ್ನಾಟಕ ಎನ್ಆರ್ಐ ನೀತಿ 2017 ಅನ್ನು ಜಾರಿಗೆ ತಂದಿದೆ.


ಹುಟ್ಟೂರಿಗೆ ಅನಿವಾಸಿ ಕನ್ನಡಿಗರಿಂದ ವಿವಿಧ ರೀತಿಯ ಕೊಡುಗೆಗಳನ್ನು ನೀಡುವುದಕ್ಕೆ ಪ್ರೋತ್ಸಾಹಿಸುವುದು, ಅನಿವಾಸಿ ಕನ್ನಡಿಗರ ದತ್ತಾಂಶ ರಚಿಸುವುದು, ಅವಶ್ಯಕ ಕಾನೂನು ನೆರವು ನೀಡುವುದು. ಅನಿವಾಸಿ ಕನ್ನಡಿಗರ ಕಾರ್ಡ್ಗೆ ನೋಂದಣಿ, ಕುಂದುಕೊರತೆಗಳ ನೋಂದಣಿ, ಆರ್ಥಿಕ ಸಹಾಯಕ್ಕೆ ಮನವಿ, ಸಂಸ್ಥೆಗಳ ನೋಂದಣಿಗೆ ಆನ್ಲೈನ್ ವ್ಯವಸ್ಥೆಯನ್ನು ಅನಿವಾಸಿ ಭಾರತೀಯ ಸಮಿತಿಯಿಂದ ಮಾಡಿಕೊಡಲಾಗಿದೆ. ಅನಿವಾಸಿ ಭಾರತೀಯರಿಗೆ ಅನುಕೂಲವಾಗುವಂತೆ “ ಅನಿವಾಸಿ ಭಾರತೀಯ ನೀತಿ,ಕರ್ನಾಟಕ –ನೀತಿ”ಯನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಮಿತಿಯ ಅಧಿಕೃತ ಜಾಲತಾಣದಿಂದ ಪಡೆದುಕೊ‍ಳ್ಳಬಹುದು.


img
img
img