ಹೂಡಿಕೆದಾರರು


ಹೂಡಿಕೆದಾರರು

ವಿಶಾಲ ಮತ್ತು ವೈವಿಧ್ಯಯ ಸಂಪನ್ಮೂಲ ಹೊಂದಿರುವ ಕರ್ನಾಟಕವು ವಿಶ್ವದ ಹೂಡಿಕೆದಾರರಿಗೆ ಅಪಾರ ಅವಕಾಶಗಳನ್ನು ತೆರೆದಿಟ್ಟಿದೆ. ವಿದೇಶಿ ನೇರ ಬಂಡವಾಳಕ್ಕೆ ಅನುಕೂಲವಾಗುವಂತಹ ಉತ್ತಮ ಕಾನೂನು ವ್ಯವಸ್ಥೆ, ವಿಫುಲವಾಗಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲ, ಸಾರಿಗೆ ಸಂಪರ್ಕ ಸೌಲಭ್ಯವನ್ನು ರಾಜ್ಯ ಸರ್ಕಾರವು ಒದಗಿಸುತ್ತದೆ. ದೇಶದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿರುವ ಬೃಹತ್ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿರುವುದು ಹಾಗೂ ದೇಶದಲ್ಲೇ ಬೃಹತ್ ಮತ್ತು ವಿಸ್ತಾರಗೊಳ್ಳುತ್ತಿರುವ ಮಾರುಕಟ್ಟೆ ವ್ಯವಸ್ಥೆ ಕರ್ನಾಟಕವಾಗಿದೆ.


ರಾಜ್ಯದಲ್ಲಿ ಹೂಡಿಕೆಗೆ ಅನುಕೂಲವಾಗುವಂತೆ ಒಂದು ನೋಡಲ್ ಏಜೆನ್ಸಿಯಾಗಿ” ಕರ್ನಾಟಕ ಉದ್ಯೋಗ ಮಿತ್ರ(kum)”ಕೆಲಸ ಮಾಡುತ್ತಿದೆ ಮತ್ತು ಹೂಡಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಗೆ “ಏಕಮಾತ್ರ ಸಂಪರ್ಕ ಕೇಂದ್ರ”ವಾಗಿದೆ. ಹೂಡಿಕೆಯ ಪ್ರಸ್ತಾವನೆ ಹಂತದಿಂದ ಯೋಜನೆಯ ಅನುಷ್ಠಾನದ ವರೆಗೂ ಅನುವಾಗುವುದು ಮತ್ತು ಉಪಕ್ರಮಗಳನ್ನು ಜಾರಿಗೆ ತರುವುದು ಉದ್ಯೋಗ ಮಿತ್ರದ ಪಾತ್ರವಾಗಿರುತ್ತದೆ.


ರೂ.15 ಕೋಟಿಗಳಿಗಿಂತ ಹೆಚ್ಚಿನ ಮತ್ತು ರೂ. 499 ಕೋಟಿ ವರೆಗಿನ ಹೂಡಿಕೆಗೆ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಹಾಗೂ ರೂ.500 ಕೋಟಿಗಳಿಗೂ ಹೆಚ್ಚಿನ ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗಳಿಂದ ಪ್ರಸ್ತಾವನೆಗಳಿಗೆ ಅನುಮತಿ ನೀಡುತ್ತವೆ.


ಕರ್ನಾಟಕ ವಾಣಿಜ್ಯೋದ್ಯಮಕ್ಕೆ ಅನುಕೂಲವಾಗುವಂತೆ “ಕರ್ನಾಟಕ ನವೋದ್ಯಮ ನೀತಿ 2015- 2020” ಜಾರಿಗೆ ತಂದಿದೆ. ಅನೇಕ ನವೋದ್ಯಮ ನಿಧಿಗಳನ್ನು ಸ್ಥಾಪಿಸಿದ್ದು ಅವುಗಳ ಇಡಿಗಂಟು(corpus) ರೂ. 300 ಕೋಟಿಗಳಷ್ಟಿದೆ.


ಜ್ಞಾನಾಧಾರಿತ ಕೈಗಾರಿಕೆಗಳಾದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಗಳ ಮೇಲೆ ಹೂಡಿಕೆಯನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಐ-4 ನೀತಿಯನ್ನು ಜಾರಿಗೆ ತರಲಾಗಿದೆ. ಈ ಸಂಬಂಧಿತ ಹೂಡಿಕೆಗಳ ಮಾಹಿತಿಗೆಗಾಗಿ ” ಕೆ-ಬಿಟ್ಸ್” ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ರೂ.99 ಕೋಟಿಗಳಿಗೆ ಕಡಿಮೆ ಹೂಡಿಕೆಯ ಪ್ರಸ್ತಾವನೆಗಳಿಗೆ ರಾಜ್ಯ ಮಟ್ಟದ ಸಮಿತಿ ಮತ್ತು ಹಾಗೂ ರೂ. 100ಕೋಟಿಗಳಿಗೂ ಹೆಚ್ಚಿನ ಹೂಡಿಕೆಗಳಿಗೆ ರಾಜ್ಯ ಉನ್ನತ ಸಮಿತಿಗಳು ಪರಿಶೀಲನೆ ಮತ್ತು ಅನುಮೋದನೆ ನೀಡುತ್ತವೆ.


ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇರುವ ಕಾರಣಗಳು ಮತ್ತು ಅವಕಾಶಗಳೆಂದರೆ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣವು ಶೇ. 7ರಷ್ಟಿದೆ. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ರಾಜ್ಯ ಕರ್ನಾಟಕ. ರಫ್ತು ವ್ಯಾಪಾರದಲ್ಲಿ ಹೆಚ್ಚಿನ ಪ್ರಮಾಣದ ಜಾಗತೀಕತೆ ಹೊಂದಿದೆ. ಕರ್ನಾಟಕವು ನಾಲ್ಕನೇ ಬೃಹತ್ “ಜಾಗತಿಕ ತಂತ್ರಜ್ಞಾನ ಕ್ಲಸ್ಟರ್”: ಎಂ.ಐ.ಟಿ, 90,000 ಎಕರೆ “ಲ್ಯಾಂಡ್ ಬ್ಯಾಂಕ್” ಲಭ್ಯವಿದ್ದು, “40,000” ಎಕರೆ ಭೂಮಿಯನ್ನು ಕೈಗಾರಿಕೆಗೆ ಗುರುತಿಸಲಾಗಿದೆ. ಉತ್ಕೃಷ್ಟ ಮತ್ತು ಕೌಶಲ್ಯಾಧಾರಿತ ಮಾನವ ಸಂಪನ್ಮೂಲ. ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸುವಲ್ಲಿ ಪ್ರವರ್ತಕ ರಾಜ್ಯ. ಬೆಂಗಳೂರು ಕೆಲಸಕ್ಕೆ ಮತ್ತು ವಸತಿಗೆ ಯೋಗ್ಯ ನಗರವಾಗಿದೆ. ಹೂಡಿಕೆಗೆ ಸಂಬಂಧಿಸಿದ ಎಲ್ಲ ಕಾರ್ಯಚಟುವಟಿಕೆಗಳಿಗೆ ನೋಡಲ್ ಏಜೆನ್ಸಿಯಾಗಿರುವ “ಕರ್ನಾಟಕ ಉದ್ಯೋಗ ಮಿತ್ರ”,


img
img
img
img
<
img
img
img
img

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ ಇತ್ತೀಚಿನ ನವೀಕರಣ​ : 25-02-2020 05:12 PM ಸಂದರ್ಶಕರು : 100548 ಆವೃತ್ತಿ : CeG/KRN 1.4