ಸಂತ ಶಿಶುನಾಳ ಷರೀಫ ಪ್ರಶಸ್ತಿ

ಸಂತ ಶಿಶುನಾಳ ಷರೀಫ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಕನ್ನಡದ ಹೆಮ್ಮೆಯ ಸಂತ ಕವಿ ಶಿಶುನಾಳ ಷರೀಫರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಕಲಾವಿದರಿಗೆ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಸಂತ ಶಿಶುನಾಳ ಷರೀಫ್ ಪ್ರಶಸ್ತಿಯನ್ನು ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀಮತಿ ಜಯಂತಿದೇವಿ ಹಿರೇಬೆಟ್ 1995
2. ಶ್ರೀ ಸಿ. ಅಶ್ವಥ್ 1996
3. ಶ್ರೀಮತಿ ಹೆಚ್.ಆರ್. ಲೀಲಾವತಿ 1997
4. ಶ್ರೀಮತಿ ಅನುರಾಧಾ ಧಾರೇಶ್ವರ 1998
5. ಶ್ರೀ ಶಿವಮೊಗ್ಗ ಸುಬ್ಬಣ್ಣ 1999
6. ಶ್ರೀ ಎಚ್.ಕೆ. ನಾರಾಯಣ 2000
7. ಶ್ರೀ ಎಂ. ಪ್ರಭಾಕರ್ 2001
8. ಶ್ರೀ ಗರ್ತಿಕೆರೆ ರಾಘಣ್ಣ 2002
9. ಶ್ರೀಮತಿ ಶ್ಯಾಮಲಾ ಜಾಗೀರ್‌ದಾರ್ 2003
10. ಶ್ರೀ ಮುರುಗೋಡು ಕೃಷ್ಣದಾಸರು 2004
11. ಶ್ರೀ ಈಶ್ವರಪ್ಪ ಮಿಣಜಿ 2005
12. ಶ್ರೀಮತಿ ಸಿ.ಕೆ. ತಾರಾ 2006
13. ಶ್ರೀ ಕೇಶವ ಗುರಂ 2007
14. ಶ್ರೀ ಗುಡಿಬಂಡೆ ರಾಮಾಚಾರ್ 2008
15. ಶ್ರೀ ಟಿ.ವಿ. ರಾಜು, ತುಮಕೂರು 2009
16. ಶ್ರೀಮತಿ ಬಿ.ಕೆ. ಸುಮಿತ್ರ, ಬೆಂಗಳೂರು 2010
17. ಶ್ರೀ ನಾರಾಯಣ್‌ರಾವ್ ಮಾನೆ, ಬೆಂಗಳೂರು 2011
18. ಶ್ರೀ ಎಸ್.ಸೋಮಸುಂದರಂ, ಬೆಂಗಳೂರು 2012
19. ಶ್ರೀಮತಿ ಎಸ್.ಕೆ.ವಸುಮತಿ, ಮೈಸೂರು 2013
20. ಶ್ರೀ ರಾಜಗುರು ಗುರುಸ್ವಾಮಿ ಕಲಿಕೇರಿ, ಗದಗ 2014
21. ಶ್ರೀಮತಿ ರತ್ನಮಾಲ ಪ್ರಕಾಶ್, ಬೆಂಗಳೂರು 2015
22. ಶ್ರೀ ವೈ.ಕೆ. ಮುದ್ದುಕೃಷ್ಣ, ಬೆಂಗಳೂರು 2016
23. ಶ್ರೀ ಅಮೀನ್ ಸಾ ಶರೀಫ್ ವಠಾರ, ವಿಜಯಪುರ 2017
24. ಶ್ರೀ ಹುಸೇನ್ ಸಾಬ್, ಕನಕಗಿರಿ 2018
25. ಶ್ರೀ ಪಂಡಿತ ವಾದಿರಾಜ ನಿಂಬರಗಿ
, ಧಾರವಾಡ
2019

ಇತ್ತೀಚಿನ ನವೀಕರಣ​ : 12-03-2020 11:24 AM ಅನುಮೋದಕರು: Admin