ಸಂಗೊಳ್ಳಿರಾಯಣ್ಣ ಪ್ರಶಸ್ತಿ

‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಕನ್ನಡ ನಾಡಿನ ನೆಲದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮನಾದ ಕೆಚ್ಚೆದೆಯ ಗಂಡುಗಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಕನ್ನಡ ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರನ್ನು ಗುರುತಿಸಿ ಪ್ರತಿ ವರ್ಷವೂ ಒಬ್ಬರಿಗೆ ‘ಸಂಗೊಳ್ಳಿ ರಾಯಣ್ಣ’ ಪ್ರಶಸ್ತಿಯನ್ನು ೨೦೧೩ನೆಯ ಸಾಲಿನಿಂದ ನೀಡಲಾಗುವುದು. ಈ ಪ್ರಶಸ್ತಿಯು ರೂ.೫.೦೦ ಲಕ್ಷಗಳ ನಗದು ಬಹುಮಾನ, ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀ ವಾಟಾಳ್ ನಾಗರಾಜ್, ಬೆಂಗಳೂರು 2003
2. ಶ್ರೀಮತಿ ಬಿ.ಟಿ. ಲಲಿತಾ ನಾಯಕ್, ಬೆಂಗಳೂರು 2004
3. ಶ್ರೀ ಜಂಬಣ್ಣ ಅಮರಚಿಂತ, ರಾಯಚೂರು 2005
4. ಡಾ.ಚೆನ್ನಣ್ಣ ವಾಲೀಕಾರ, ಕಲಬುರ್ಗಿ 2016
5. ಶ್ರೀ ಜಿ. ಮಾದೇಗೌಡ, ಮಂಡ್ಯ 2017
6. ಶ್ರೀ ಎಸ್ ಆರ್‍ ಹಿರೇಮಠ 2018

 

ಇತ್ತೀಚಿನ ನವೀಕರಣ​ : 10-02-2020 12:13 PM ಅನುಮೋದಕರು: Admin