ಪ್ರೊ ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ

‘ಪ್ರೊ: ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಕರ್ನಾಟಕದ ಗಡಿಭಾಗದಲ್ಲಿ ಸಾಹಿತ್ಯ-ಸಂಶೋಧನೆಗೆ ಅಪರಿಮಿತವಾದ ಸೇವೆ ಸಲ್ಲಿಸಿದ ಹೆಸರಾಂತ ಸಾಹಿತಿಗಳು ಹಾಗೂ ಸಂಶೋಧಕರಿಗೆ ‘ಪ್ರೊ: ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ’ ಪ್ರಶಸ್ತಿಯನ್ನು ನೀಡಲು ಘೋಷಣೆ ಮಾಡಿದ್ದು, 2010-11ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಪ್ರಶಸ್ತಿಯು ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದು, ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ ‘ಪ್ರೊ: ಕೆ.ಜಿ. ಕುಂದಣಗಾರ ಗಡಿನಾಡ ಪ್ರಶಸ್ತಿ’ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ: ಸರಜೂ ಕಾಟ್ಕರ್, ಧಾರವಾಡ 2011
2. ಕುಂ. ವೀರಭದ್ರಪ್ಪ, ಬಳ್ಳಾರಿ 2012
3. ಡಾ. ಎಂ.ಜಿ.ಬಿರಾದಾರ, ಗುಲ್ಬರ್ಗಾ 2013
4. ಶ್ರೀ ಶಾಂತಪ್ಪ ಶರಣಪ್ಪ ದೇವರಾಯ, ಬೀದರ್ (ದೇಶಾಂಶ ಹುಡಗಿ) 2014
5. ಶ್ರೀ ಎಂ.ಎಸ್. ಸಿಂಧೂರ, ಬಾಗಲಕೋಟೆ 2015
6. ಶ್ರೀ ಹಸನ್ ನಯೀಂ ಸುರ‌ಕೋಡ 2016
7. ಶ್ರೀ ಬಿ.ಎ. ಜಮಾದಾರ್ , ವಿಜಯಪುರ 2017
8. ಶ್ರೀ ಬಿ.ಗಂಗಾಧರ ಮೂರ್ತಿ 2018

ಇತ್ತೀಚಿನ ನವೀಕರಣ​ : 14-05-2020 04:54 PM ಅನುಮೋದಕರು: Admin