ಬಿ.ವಿ. ಕಾರಂತ ಪ್ರಶಸ್ತಿ

“ಬಿ.ವಿ.ಕಾರಂತ” ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಸರ್ಕಾರದ ಆದೇಶ ಸಂಖ್ಯೆ:ಕಸಂವಾ/666/ಕಸಧ/2014, ಬೆಂಗಳೂರು. ದಿನಾಂಕ:18.07.2014ರ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಸರ್ಕಾರವು ಭಾರತೀಯ ರಂಗಭೂಮಿ ಹರಿಕಾರರಲ್ಲಿ ಒಬ್ಬರಾದ, ದೇಶ ಕಂಡ ಅಪರೂಪದ ರಂಗಕರ್ಮಿ, ಆಧುನಿಕ ರಂಗಭೂಮಿ ತನ್ನದೇ ಆದ ನೆಲೆ ಕಂಡುಕೊಳ್ಳಲು ತಮ್ಮ ಅಸಾಮಾನ್ಯ ಸಂಗೀತ ಪ್ರತಿಭೆಯಿಂದ ರಂಗ ಸಂಗೀತ ಎಂಬ ಹೊಸ ಪ್ರಕಾರಕ್ಕೆ ನಾಂದಿ ಹಾಡಿದ, ಮೈಸೂರಿನಲ್ಲಿ ರಂಗಾಯಣ ನಿರ್ಮಾಣದ ರೂವಾರಿಯೆನಿಸಿದ ಶ್ರೀ ಬಿ.ವಿ.ಕಾರಂತ (ಬಾಬು ಕೋಡಿ ವೆಂಕಟರಮಣ ಕಾರಂತ) ಇವರ ಹೆಸರಿನಲ್ಲಿ ಕನ್ನಡದ ಹವ್ಯಾಸಿ ರಂಗಕರ್ಮಿಗಳನ್ನು (ಹವ್ಯಾಸಿ ರಂಗಭೂಮಿಯ ನಟ-ನಟಿ, ನಿರ್ದೇಶಕ, ತಂತ್ರಜ್ಞರು, ರಂಗ ಸಂಗೀತ ತಜ್ಞರು ಮತ್ತು ನಾಟಕಕಾರರು) ಗುರ್ತಿಸಿ, ಪ್ರತಿ ವರ್ಷವೂ ಒಬ್ಬರಿಗೆ ರಾಜ್ಯ ಮಟ್ಟದಲ್ಲಿ ‘ಬಿ.ವಿ.ಕಾರಂತ ಪ್ರಶಸ್ತಿ’ಯನ್ನು ನೀಡಲು ಸರ್ಕಾರ ಆದೇಶಿಸಿದೆ. ಈ ಪ್ರಶಸ್ತಿಯು ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದು, ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಶ್ರೀ ವಿ.ರಾಮಮೂರ್ತಿ, ಬೆಂಗಳೂರು 2014
2. ಡಾ. ನ.ರತ್ನ, ಮೈಸೂರು 2015
3. ಶ್ರೀ ಶ್ರೀನಿವಾಸ್ .ಜಿ. ಕಪ್ಪಣ್ಣ, ಬೆಂಗಳೂರು 2016
4. ಶ್ರೀ ಎಂ.ಎಸ್. ಸತ್ಯು, ಬೆಂಗಳೂರು 2017

 

ಇತ್ತೀಚಿನ ನವೀಕರಣ​ : 10-02-2020 12:12 PM ಅನುಮೋದಕರು: Admin