ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ

ಕರ್ನಾಟಕ ಸರ್ಕಾರ

cmk2k
GOK > KCI
Last modified at 20/07/2018 15:37 by System Account

ಕನ್ನಡ, ಸಂಸ್ಕೃತಿ  ಮತ್ತು ವಾರ್ತಾ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ದೂರದೃಷ್ಠಿ:

     ಭಾರತ ಮತ್ತು ಜಗತ್ತಿನಾದ್ಯಂತ ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಪ್ರಚುರಪಡಿಸುವ ಮತ್ತು ಭಾಷೆ-ಸಂಸ್ಕೃತಿಗಳ ಸಂರಕ್ಷಣೆ ಮತ್ತು ಸಂವರ್ಧನೆ ಕಾರ್ಯಗಳನ್ನು ಕೈಗೊಳ್ಳುವುದು.

ಗುರಿ:

      ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಗಳ ಸಂರಕ್ಷಣೆ, ಭಾಷೆ ಮತ್ತು ಕಲಾ ಪ್ರಕಾರಗಳನ್ನು ಆಧುನಿಕ ತಂತ್ರಜ್ಞಾನ ಮಾಧ್ಯಮಗಳ ಮೂಲಕ ಅಭಿವೃಧ್ಧಿಪಡಿಸಿ ಮುನ್ನೋಟದ ಗುರಿಗಳನ್ನು ಸಾಧಿಸುವುದು.

ಧ್ಯೇಯೋದ್ದೇಶಗಳು:

 1. ಸರ್ಕಾರದ ಎಲ್ಲ ಹಂತಗಳಲ್ಲಿ ಕನ್ನಡ ಬಳಕೆಯನ್ನು ಪ್ರೋತ್ಸಾಹಿಸುವುದು.
 2. ಸಂಸ್ಕೃತಿ  ಮತ್ತು ಪರಂಪರೆಯನ್ನು ಅಭಿವೃದ್ಧಿಪಡಿಸಲು ಪೂರಕವಾಗಿ ಸಾಹಿತಿ-ಕಲಾವಿದರು ಮತ್ತು ಸಂಘ- ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು.
 3.  ಕರ್ನಾಟಕದ ಭಾಷೆ-ಸೋದರ ಭಾಷೆಗಳು ಹಾಗೂ ಪರಂಪರೆಯನ್ನು ಸಮರ್ಥವಾಗಿ ಜಗತ್ತಿನಾದ್ಯಂತ ಪ್ರಚಾರ ಮಾಡುವುದು.
 4.  ಮುಂದಿನ ಪೀಳಿಗೆಗಾಗಿ ಪ್ರಾಚೀನ ದಾಖಲೆ–ದಸ್ತಾವೇಜುಗಳನ್ನು ರಕ್ಷಿಸಿ ಕಾಪಾಡುವುದು.
 5.  ಪುರಾತನ ಸ್ಥಳಗಳು, ಸ್ಮಾರಕ, ಪಳೆಯುಳಿಕೆಗಳು ಅನ್ವೇಷಣೆ, ಉತ್ಖನನ, ಹಾಗೂ ಸಂರಕ್ಷಣೆ.
 6.  ಕಲೆ ಮತ್ತು ಪರಂಪರೆಯ ಪ್ರಾಚೀನ ನಮೂನೆ ಮತ್ತು ಪಳೆಯುಳಿಕೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಸಂರಕ್ಷಿಸಿಡುವುದು.
 7. ಕಲೆ ಮತ್ತು ಸಂಸ್ಕೃತಿಗಳ ದಾಖಲೀಕರಣ ಮಾಡುವುದು ಮತ್ತು ಆಧುನಿಕ ಮಾಧ್ಯಮಗಳ ಮೂಲಕ ಜ್ಞಾನ ಪ್ರಸಾರಕ್ಕೆ ಒತ್ತು ನೀಡುವುದು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸಕ್ತ ಬೆಂಗಳೂರಿನ ವಿಕಾಸಸೌಧದ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು ಇಲಾಖೆಯ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಈ ಇಲಾಖೆಯಲ್ಲಿ ಒಬ್ಬರು ಉಪಕಾರ್ಯದರ್ಶಿ, ಇಬ್ಬರು ಅಧೀನ ಕಾರ್ಯದರ್ಶಿಗಳು, ಶಾಖಾಧಿಕಾರಿಗಳು ಮತ್ತು ಸಿ ಮತ್ತು ಡಿ ವರ್ಗದ ನೌಕರರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಕ್ಷೇತ್ರೀಯ ಇಲಾಖೆಗಳ ಆಡಳಿತಾತ್ಮಕ, ಆರ್ಥಿಕ ಹಾಗೂ ಸೇವೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಯೋಜನಾಬದ್ಧವಾಗಿ ನಿರ್ವಹಿಸಲಾಗುತ್ತಿದೆ.

1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ

2. ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

3. ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ

4. ಕರ್ನಾಟಕ ಗ್ಯಾಜೆಟಿಯರ್ ಇಲಾಖೆ

5. ಕನ್ನಡ ಅಭಿವೃದ್ಧಿ ಪ್ರಾಧಿಕಾರ

6. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

7. ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು, ಮೈಸೂರು         

8. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹೊಸಪೇಟೆ.

ವಾರ್ತಾ ಇಲಾಖೆ

ದೂರದೃಷ್ಠಿ:-

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪ್ರಮುಖ ಪಾತ್ರ ವಹಿಸುತ್ತದೆ.

ಗುರಿ:

ಟಿ.ವಿ ರೇಡಿಯೋ ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಮತ್ತು ಸಾಂಪ್ರದಾಯಿಕ ಮಾಧ್ಯಮಗಳಾದ ಬೀದಿ ನಾಟಕ, ಸಂಗೀತ ನಾಟಕ ಸೇರಿದಂತೆ ನವ ಮಾಧ್ಯಮವಾದ ಇಂಟರ್ ನೆಟ್, ಫೇಸ್ ಬುಕ್, ಟ್ವೀಟರ್ ಮೂಲಕವೂ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮ ಮತ್ತು ಸಾಧನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ದಿಸೆಯಲ್ಲಿ ಪ್ರಚಾರ ನೀಡುವುದು. ಅಲ್ಲದೇ ಕನ್ನಡ ಚಲನಚಿತ್ರ ರಂಗವನ್ನು ಪ್ರೋತ್ಸಾಹಿಸಿ ಬೆಳಸುವ ಸದಾಶಯದಿಂದ ರಾಜ್ಯದಲ್ಲಿಯೇ ನಿರ್ಮಿಸಿದ ಕನ್ನಡ ಮತ್ತು ಪ್ರಾದೇಶಿಕ ಚಿತ್ರಗಳಿಗೆ ಪ್ರಗತಿಪರ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು.

ಧ್ಯೇಯೋದ್ಧೇಶಗಳು:

 1. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ, ಯೋಜನೆಗಳನ್ನು ಕುರಿತ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಜಾಹೀರಾತು ಸ್ಪಾಟ್ಸ್ ಗಳನ್ನು ನಿರ್ಮಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವುದು
 2. .ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಗಣ್ಯರನ್ನು ಕುರಿತು ವ್ಯಕ್ತಿ ಚಿತ್ರಗಳನ್ನು ನಿರ್ಮಿಸಿ ದೂರದರ್ಶನ ಹಾಗೂ ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದು.
 3. ಪತ್ರಿಕಾಗೋಷ್ಠಿ ಮತ್ತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು.
 4. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ಹಾಗೂ ಗಮನಾರ್ಹ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ ಗೌರವಿಸುವುದು.
 5. ಸಂಪ್ರದಾಯಿಕವಾಗಿ ರಾಷ್ಟ್ರೀಯ ಮತ್ತು ರಾಜ್ಯದ ಮಹತ್ವದ ಸಂದರ್ಭಗಳಲ್ಲಿ ಹಾಗೂ ರಾಷ್ಟ್ರದ ನಾಯಕರ ದಿನಾಚರಣೆಗಳಂತಹ ಸಂದರ್ಭಗಳಲ್ಲಿ ಜಾಹೀರಾತನ್ನು ಬಿಡುಗಡೆ ಮಾಡುವುದು.
 6. ಕನ್ನಡ ಚಲನಚಿತ್ರ ರಂಗವನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿಯೇ ನಿರ್ಮಿಸಿದ ಕನ್ನಡ ಮತ್ತು ಪ್ರಾದೇಶಿಕ ಚಿತ್ರಗಳಿಗೆ ಮನರಂಜನ ತೆರಿಗೆ ವಿನಾಯಿತಿ ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನ , ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರ, ಚಲನಚಿತ್ರಗಳ ಚಿತ್ರೀಕರಣದ ಸುಗಮ ರಹದಾರಿಗಾಗಿ ಏಕಗಾವಕ್ಷಿ ಪದ್ದತಿ ಮುಂತಾದ ಪ್ರಗತಿಪರ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು.
 7. ರಾಜ್ಯದ ಜನತೆಗೆ ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ಪರಿಚಯಿಸುವ ಉದ್ದೇಶದೊಂದಿಗೆ ಪ್ರತಿವರ್ಷ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಚರಿಸುವುದು.

ವಾರ್ತಾ ಇಲಾಖೆಯು ಪ್ರಸಕ್ತ ಬೆಂಗಳೂರಿನ ವಿಕಾಸಸೌಧದ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾನ್ಯ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಸಚಿವರು ಇಲಾಖೆಯ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಈ ಇಲಾಖೆಯಲ್ಲಿ ಒಬ್ಬರು ಉಪಕಾರ್ಯದರ್ಶಿ, ಒಬ್ಬರು ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ, ಮತ್ತು ಸಿ ಮತ್ತು ಡಿ ವರ್ಗದ ನೌಕರರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಲಾಖೆಯ ವ್ಯಾಪ್ತಿಯಲ್ಲಿ ಬರುವ  ಈ ಕೆಳಕಂಡ ಕ್ಷೇತ್ರೀಯ ಇಲಾಖೆಗಳ ಆಡಳಿತಾತ್ಮಕ ಆರ್ಥಿಕ ಹಾಗೂ ಸೇವೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಯೋಜನಾಬದ್ಧವಾಗಿ ನಿರ್ವಹಿಸಲಾಗುತ್ತಿದೆ.

1.         ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

2.         ಕರ್ನಾಟಕ ಮಾಧ್ಯಮ ಅಕಾಡೆಮಿ.

3.         ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ

4.         ಕರ್ನಾಟಕ ಚಲನಚಿತ್ರ ಅಕಾಡೆಮಿ.

5.         ಶ್ರೀ ಕಂಠೀರವ ಸ್ಟುಡಿಯೋ ನಿಯಮಿತ.


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top